ISBN : 978-93-93557-97-1
Category : Fiction
Catalogue : Novel
ID : SB20245
Paperback
400.00
e Book
199.00
Pages : 263
Language : Kannada
ಮುನ್ನುಡಿ " ಬಾಡಿದ ಸುಂದರ ಹೂಗಳು" ಈ ಶೀರ್ಷಿಕೆಯ ಲೇಖನದ ಬಗ್ಗೆ ಹೇಳಬೇಕೆಂದರೆ " ಮಾನಸ ವೀಣಾ " ರವರ ಮೊದಲ ಕೄತಿ. 23 ಅಧ್ಯಾಯಗಳು ಸರಳ ಸಂಭಾಷಣೆ ಮತ್ತು ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗಿ ಸುಂದರತೆಯನ್ನು ಕಳೆದುಕೊಂಡ ಹೂಗಳಾಗಿರುತ್ತಾರೆ. ಈ ಕಥೆಯಲ್ಲಿ ಬರುವ ನಾಲ್ಕು ಸುಂದರ ಹೂಗಳು , ಸರಾಯು ತನ್ನ ಪ್ರೀತಿಗೆ ಬೆಲೆ ಇರದವನನ್ನು ಮನಸಾರೆ ಪ್ರೀತಿಸಿ ತಿರಸ್ಕೄತಳಾಗುತ್ತಾಳೆ. ಮಿನಲ್ ತನ್ನ ಪ್ರಿಯತಮನಿಗಾಗಿ ತನ್ನೇಲ್ಲಾ ಹೆಣ್ತನವನ್ನೆಲ್ಲಾ ಧಾರೆ ಎರೆದು ಕೊಟ್ಟು ಮನೋಹರನ ಹೆಂಡತಿಯ ಸ್ಧಾನ ಪಡೆಯಲಾಗದೆ ಅವನ ಜೊತೆಯಲ್ಲೆ ಜೀವನ ಪೂರ್ತಿ ಇರಲು ಒಪ್ಪುತ್ತಾಳೆ. ಇನ್ನು ಪವಿತ್ರ ಸೋದರ ಮಾವನ ಕಾಮ ಪಿಪಾಸೆಗೆ ಸಿಲುಕಿ ಒಂದು ಹೆಣ್ಣುಮಗುವಿನ ತಾಯಿಯಾಗಿ ಗಂಡನಿಲ್ಲದ ಚಿಕ್ಕಮ್ಮನ ಮನೆ ಸೇರುತ್ತಾಳೆ. ಹಂಸ ಗೆಳತಿಗೆ ಸಹಾಯ ಮಾಡುತ್ತಾ ಪವಿತ್ರಳ ಜೀವನದುದ್ದಕ್ಕೂ ಸಹಾಯ ಮಾಡುತ್ತಾ ತನ್ನ ಮನೆಯವರನ್ನೇಲ್ಲ ಒಂದು ದಡ ಸೇರಿಸಲು ಶ್ರಮಪಟ್ಟು ಅಂತ್ಯದ ಜೀವನಕ್ಕೆ ಸಂಗಾತಿಯನ್ನು ಹುಡುಕಿ ಎರಡನೆ ಹೆಂಡತಿಯಾಗಿ ತಾಯಿ, ತಮ್ಮನ ಜೊತೆ ಇರುತ್ತಾಳೆ. ಈ ರೀತಿಯ ಎಲ್ಲಾ ಕಷ್ಟಗಳನ್ನು ಹೆಣ್ಣುಮಕ್ಕಳು ಮಾತ್ರ ಅನುಭವಿಸಿ " ಬಾಡಿದ ಸುಂದರ ಹೂಗಳಾಗಿ " ಜೀವನ ಇಡೀ ತ್ಯಾಗದಲ್ಲೆ ಕಳೆಯುತ್ತಾರೆ. ನನ್ನ ಸ್ವಂತ ಅಭಿಪ್ರಾಯ ಒಬ್ಬ ಗಂಡಸಿಗಾದ್ರು ಶಿಕ್ಷೆಯಾಗಬೇಕಿತ್ತು. ಮಾನಸ ವೀಣಾ ರವರು ತಮ್ಮ ಲೇಖನ ಮುಂದುವರಿಸಲಿ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಲಿ. ನಿಮ್ಮ ಪ್ರೀತಿಯ ಗೆಳತಿ ಮಣಿ . ಆರ್ . ರಾವ್ ಸಾಹಿತಿ , ಲೇಖಕಿ